2 ಕೊರಿಂಥ6vaa_wft
1ಹಮೆ ದೇವ್ನಿ ಜೋ಼ಡ್ಮ ಕಾಮ್ ಕರಾವಾಳ ಹುಯಿರ‍್ಹಾಸ್.ಇನಾಖ್ಹಾಜೆ ತುಮೂನ ಶಾತ್ ಬೋಲಿಲಿಯೇಸ್ ಕತೊ,ತುಮೆ ದೇವ್‍ಥಿ ಲೀರಾಖ್ಯಾತೆ ವಾರ್‌ಖ್ಹಾನ ಗುಮೈನಕೊಲಿಶು ಕರಿ ಗಿಂಗೈಲಿಯೇಸ್2ಪ್ರಸನ್ನತೆನ ಹಗಾಮ್ಮ ಮೇ ತುನ ಕಾನ್‍ದಿದೊ, ರಕ್ಷಣೆನ ದನ್ಮ ಮೆ ತುನ ಮದತ್ ಕರ‍್ಯೊ ಕರಿ ಬೋಲ್ತೊಹುಯಿನ್ ಹಂದೇಕ್ ಹಮ್ಕೇಸ್ ಯೋ ಸ್ವೀಕಾರ‍್ನೊ ದನ್, ಹಂದೇಕ್ ಯೋ ರಕ್ಷಣೆನಿ ವೇಳ್.3ಹಮಾರಿ ಚಾ಼ಕ್ರಿ ಕಿನ ಖ್ಹಾಮ್ಣೇಬಿ ಚಿಂಘಾವ್ಣಿಮ ನಾಪಡ್ನುತೆ, ಹಮೆ ಕಿನಾಬಿ ಖ್ಹತಾಯಕೊಯ್ನಿ4ಕತೋಬಿ ಹರೇಕ್ ಚಾ಼ಲ್‍ಮಾಬಿ ಹಮೆ ದೇವ್ನ ಸೇವೆಕರಾವಾಳ ಕರಿ ವತಾಳಿಲಿಯೆಸ್, ಹಮೆ ಖ್ಹತಾಪ್ಣಿಮಾಬಿ, ಶಾತ್‍ಕೊಂತೆ ತದೆಬಿ, ಝಂಝಟ್‍ಮಾಬಿ, ಮಾರೊಮಾರ್‌ಮಾಬಿ,5ಜೇಲ್‌ಮಾಬಿ, ಲಡೈಮಾಬಿ, ಖ್ಹತಾಪ್ಣಿನ ರಬೇಡ್‍ಮಾಬಿ, ನಿಂದರ್ ಖರಾಬ್ ಹುಯ್ಗಿತೋಬಿ, ಪಟ್ನಿರ‍್ಹಯೊತೋಬಿ, ಘಣಿ ಸಮಾಧಾನ್ನ ವತಾಳಿಲಿದ.6ಹಮೆ ದೇವ್ನ ಸೇವೆ ಕರಾವಾಳಕರಿ ಹಮಾರಿ ಶುದ್ಧಮನ್‌ಥೀಬಿ, ಗ್ಯಾನ್‍ಥಿಬಿ, ಖ್ಹಮಾಳಿನ್‌ಚಾ಼ಲಥೀಬಿ, ಗೋರ್‌ಥೀಬಿ, ಬಿಜು಼ ಪರಿಶುದ್ ಜೀವಿತ್‍ಥಿಬಿ ವತಾಳಿಲಿದ. ಹಮೆ ಅನ ಪವಿತ್ರಾತ್ಮಥಿಬಿ, ಖ್ಹಾಚಿ ಪ್ಯಾರ್‌ಥೀಬಿ,7ಖ್ಹಾಚಿ ವಚನ್, ದೇವ್‍ಥಿ ನಿಕ್ಳಾತೆ ಶಕತ್ ಆ ಅಖ್ಖಾನ ಲೀಲಿನ್, ಖಾವಿಡಾವಿ ಬಾಜು಼ಮ ನೀತಿಕರಿ ಕಫ್ಫನ್ನ ಲೀರಾಖ್ಯಸ್.8ಥೋಡು ಜ಼ಣು ಹಮೂನ ಸನ್ಮಾನ್‍ಕರಸ್, ಬಿಜು಼ ಥೋಡು ಜ಼ಣು ಹಮೂನ ಖ್ಹರಮ್‍ಕಾಡಸ್, ಥೋಡುಜ಼ಣು ಖ್ಹರಾವ್ಣಿಕಾಡಸ್ ಬಿಜು಼ಥೋಡು ಜ಼ಣು ಹಮಾರಿ ಬಾರೇಮ ಖರಾಬ್ ವಾತೆ ಬೋಲಾಸ್, ಥೋಡುಜ಼ಣು ಹಮೂನ ಝೂ಼ಟ ಕರಿ ಬೋಲಸ್, ಕತೋಬಿ ಹಮೆ ಖ್ಹಾಚಿಸ್ ಬೊಲಿಯೇಸ್.9ಮಾಲುಮ್ ರ‍್ಹವಾಳು ಮರವಾಳುಹುಯಿನ್ ದೇಖಾಯುತೋಬಿ ಹಂದೇಖೊ ಹಮೆ ಬಚಿರ‍್ಹಿಶು. ಮಾರ್‌ಪೀಟ್ಮ ಪಡ್ಯತೋಬಿ ಮರಿಜಾ಼ಶುಕೊಂತೆ ರ‍್ಹಿಶು.10ದುಖ್‌ಲ್ಯವಾಳ ರ‍್ಹಿಯಾತೋಬಿ ಸೇವೆಮ ಕದೇಬಿ ಹಾಶಿಖ್ಹುಶಾಲಿಥಿ ರ‍್ಹವಾಳ ಹುಯಿರ‍್ಹಾಸ್, ಗರೀಬ್‍ರ‍್ಹಿಯತೋಬಿ ಕೈಏಕ್ ಜ಼ಣನ ವಿಶ್ವಾಸ್‌ಮ ಧನ್‍ದೌಲತ್‌ವಾಳ ಕರೀನ್ ಬಣೈರಾಖ್ಯಾಸ್; ಶಾತ್‍ಬಿಕೊಂತೆ ರ‍್ಹಿಯತೋಬಿ ಅಖ್ಖಾನ ಲೀರಾಖವಾಳ ಹುಯಿರ‍್ಹಾಸ್.11ಕೊರಿಂಥವಾಳಾವೊ, ತುಮಾರಿಜೋ಼ಡ್ಮ ಛು಼ಟ ಮನ್‌ಥೀಬಿ ಛು಼ಟ ದಿಲ್‌ಥೀಬಿ ವಾತೆ ಬೋಲಿರಾಖ್ಯಾಸ್.12ತುಮಾರಪರ್ ಹಮೂನ ಛಾತೆಪ್ಯಾರ್ ಭೀರಿಗೈಕೊಯ್ನಿ. ಕತೋಬಿ ಹಮಾರಪರ್ ತುಮೂನಛಾ಼ತೆ ಪ್ಯಾರ್ ಭೀರಿಗೈ.13ತುಮೆ ಮಾರ ಲಡ್ಕಾನಿ ಪರಕ್ಮ ಮೇ ತುಮಾರಿ ಜೋ಼ಡ್ಮ ವಾತೆ ಬೋಲುಕರುಸ್. ಹಮಾರಿನಿತರಸ್ ತುಮೇಬಿ ಹಮೂನ ಪೂರ ದಿಲ್‌ಥಿ ಪ್ಯಾರ್‌ಕರೊ.